#ಶ್ರೀಧರಭಾಮಿನಿಧಾರೆ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

Originally posted on ನಿಲುಮೆ:
– ಗುರುಪ್ರಸಾದ್ ಕೆ ಕೆ. ಶ್ರೀಧರಭಾಮಿನಿಧಾರೆ ೧-೫ ಶ್ರೀಧರಭಾಮಿನಿಧಾರೆ ೬-೧೦ ಶ್ರೀಧರಭಾಮಿನಿಧಾರೆ ೧೧-೧೫ 11) ತಾಯ ದುಃಖವ ಮರೆಸಲಿಕೆ ತಾ ಜೀಯ ಸಿರಿಧರ ಮರುಳು ಮಾಡುವ ರಾಯರಳಿದಾ ದುಃಖಮರೆಸಲು ಆಡಿ ನಲಿಸುವನೂ|| ಆಯುಕಳೆಯೇ ಸಕಲರಿಂಗು ವಿ- ಧಾಯ ಮರಣವು ಖಚಿತವಯ್ಯಾ ಒಯ್ಯುವನು ಆ ನಿಯಮಪಾಲಕ ಯಮನು ಎಲ್ಲರನೂ|| ತಾತ್ಪರ್ಯ : ಶ್ರೀಧರರು ತಾಯಿಗೆ ಪತಿವಿಯೋಗದ ಸ್ಮರಣೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ವಿಷಾದ ಭಾವ ಮೂಡಿದಾಗಲೆಲ್ಲ ತನ್ನ ನಾನಾ ವಿಧದ ಬಾಲಲೀಲೆಗಳಿಂದ ಸಮಾಧಾನಗೊಳಿಸುತ್ತಿದ್ದರು. ನಿಯಮಪಾಲಕ…

#ಶ್ರೀಧರಭಾಮಿನಿಧಾರೆ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

Originally posted on ನಿಲುಮೆ:
– ಗುರುಪ್ರಸಾದ್ ಕೆ ಕೆ. ಶ್ರೀಧರಭಾಮಿನಿಧಾರೆ ೧-೫ ಶ್ರೀಧರಭಾಮಿನಿಧಾರೆ ೬-೧೦ 6) ವೆಂಕಟಾಚಲ ಗಿರಿಯ ಅಧಿಪತಿ ವೆಂಕಟೇಶನು ಕುಲದ ದೈವನು ಸುಂಕಸಂಗ್ರಹ ಮಾಡುವಂತಹ ವಂಶ ಇವರದ್ದೂ|| ಸಂಕ ಇಹಕೂ ಪರಕು ಬೆಸೆಯುವ ಸಂಕಟವ ಬಹುದೂರ ಸರಿಸುವ ಪಂಕಜಾತ್ಮನು ಕರುಣೆ ತೋರಿಹ ವಂಶ ಇವರದ್ದೂ|| ತಾತ್ಪರ್ಯ : ಸಪ್ತಗಿರಿವಾಸ ಶ್ರೀನಿವಾಸನು ಇವರ ಕುಲದೇವರಾಗಿದ್ದಾನೆ. ಈ ‘ಪತಕಿ’ ಎಂಬ ಶಬ್ಧವು ‘ಫಸಕೀ’ ಎಂಬ ಶಬ್ದದ ಅಪಭ್ರಂಶವಾಗಿದ್ದು, ಸುಂಕವಸೂಲಿ ಮಾಡುವ ಅಧಿಕಾರಿಗೆ ಈ ಹೆಸರು ಹೇಳುವ ವಾಡಿಕೆ…

#ಶ್ರೀಧರಭಾಮಿನಿಧಾರೆ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

Originally posted on ನಿಲುಮೆ:
– ಗುರುಪ್ರಸಾದ್ ಕೆ ಕೆ. ಶ್ರೀಧರಭಾಮಿನಿಧಾರೆ ೧-೫ 1) ಮನೆಯ ದೇವರು ಹರಿಯ ನೆನೆಯುತ ಮನದ ದೇವರು ಗುರುವರರ ನಾ ಅನುಮತಿಯ ಬೇಡುತ ಪ್ರಾರಂಭಿಸುವೆ ಕಾವ್ಯವನೂ|| ತನುವು ಕೇವಲ ನಿಮ್ಮ ಆಣತಿ ಯನೂ ನಡೆಸುವ ಪಾದಸೇವಕ ಅನುದಿನವು ಭಜಿಸುವೆ ನಿಮ್ಮನು ಹರಸಿ ಭಕ್ತನನೂ|| ತಾತ್ಪರ್ಯ : ನನ್ನ ಮನೆದೇವರಾದ ವೆಂಕಟರಮಣನನ್ನು ಮನದಲ್ಲಿ ಧ್ಯಾನಿಸಿ, ಮನದ ದೇವರಾದ ಗುರು ಶ್ರೀಧರ ಸ್ವಾಮಿಗಳಲ್ಲಿ ಅನುಮತಿಯನ್ನು ಬೇಡುತ್ತಾ, ಬರೆಯಲು ಹೊರಟಿರುವ ಕಾವ್ಯರತ್ನಕ್ಕೆ ಯಶ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಈ ದೇಹವು…

#ಶ್ರೀಧರಭಾಮಿನಿಧಾರೆ

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

Originally posted on ನಿಲುಮೆ:
ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’  ಕಾರ್ಯಕ್ರಮದಲ್ಲಿ  ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ.. ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು. ವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು…

#ಶ್ರೀಧರಭಾಮಿನಿಧಾರೆ

#ಶ್ರೀಧರಭಾಮಿನಿಧಾರೆ • ಸಜ್ಜನಗಡದಲ್ಲಿ ಶ್ರೀಧರರಸೇವೆ

ಸಜ್ಜನಗಡದಲ್ಲಿ ಶ್ರೀಧರರು ಮಾಡಿದ ಸೇವೆಯ ಭಾಗವನ್ನು ಚರಿತ್ರೆಯಲ್ಲಿ ಓದಿದಾಗೆಲ್ಲ ನಾನು ಕಣ್ಣಲ್ಲಿ ನೀರು ತುಂಬಿಕೊಂಡಿದ್ದೇನೆ. ಸಾಧಾರಣವಾಗಿ ನಾನು ಬರವಣಿಗೆಯಲ್ಲಿ ತೊಡಗುವುದು ರಾತ್ರಿ ಹತ್ತರ ನಂತರವೇ. ಏಕೆಂದರೆ ಆ ಸಮಯದಲ್ಲಿ ಅತ್ತರೆ, ಕಣ್ಣಿರು ತುಂಬಿದರೆ ಯಾರಿಗೂ ಗೊತ್ತಗುವುದಿಲ್ಲ ನೋಡಿ, ಅದಕ್ಕೆ. ಗಡದಲ್ಲಿ ಆ ಹಿಂದೆಯೂ ಎಷ್ಟೋ ಜನ ಸೇವೆ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಆದರೆ ಶ್ರೀಧರರು ಮಾಡಿದ ಸೇವೆ ಮಾತ್ರ “ನ ಭೂತೋ ನ ಭವಿಷ್ಯತಿ ” . ಇತ್ತೀಚೆಗೆ ನಾವು ನಾಲ್ಕು ಜನ ಸಜ್ಜನಗಡ ಯಾತ್ರೆ ಮಾಡಿದ್ದೆವು.… Continue reading #ಶ್ರೀಧರಭಾಮಿನಿಧಾರೆ • ಸಜ್ಜನಗಡದಲ್ಲಿ ಶ್ರೀಧರರಸೇವೆ

#ಶ್ರೀಧರಭಾಮಿನಿಧಾರೆ

ಶ್ರೀಧರಭಾಮಿನಿಧಾರೆ

​#ಶ್ರೀಧರಭಾಮಿನಿಧಾರೆ ೧-೫ 1) ಮನೆಯ ದೇವರು ಹರಿಯ ನೆನೆಯುತ ಮನದ ದೇವರು ಗುರುವರರ ನಾ ಅನುಮತಿಯ ಬೇಡುತ ಪ್ರಾರಂಭಿಸುವೆ ಕಾವ್ಯವನೂ   || ತನುವು ಕೇವಲ ನಿಮ್ಮ ಆಣತಿ ಯನೂ ನಡೆಸುವ ಪಾದಸೇವಕ ಅನುದಿನವು ಭಜಿಸುವೆ ನಿಮ್ಮನು ಹರಸಿ ಭಕ್ತನನೂ  || ತಾತ್ಪರ್ಯ : ನನ್ನ ಮನೆದೇವರಾದ ವೆಂಕಟರಮಣನನ್ನು ಮನದಲ್ಲಿ ಧ್ಯಾನಿಸಿ , ಮನದ ದೇವರಾದ ಗುರು ಶ್ರೀಧರ ಸ್ವಾಮಿಗಳಲ್ಲಿ ಅನುಮತಿಯನ್ನು ಬೇಡುತ್ತಾ, ಬರೆಯಲು ಹೊರಟಿರುವ ಕಾವ್ಯರತ್ನಕ್ಕೆ ಯಶ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಈ ದೇಹವು ನಿಮ್ಮ ಆಜ್ಞೆಯನ್ನು… Continue reading ಶ್ರೀಧರಭಾಮಿನಿಧಾರೆ

Uncategorized

ಬರಬಳ್ಳಿ – ಭಾಗ 5

ಬರಬಳ್ಳಿಯಿಂದ ಸುಮಾರು ಆರೇಳು ಕಿಲೋಮೀಟರ್ ದೂರದಲ್ಲಿ ಇತ್ತು ಈ ಸಾತೊಡ್ಡಿ ಜಲಪಾತ. ಸಾತೊಡ್ಡಿ ಅಂತ ಹೆಸರು ಬರಲು ಕಾರಣ , ಆ ಊರಿನ ಹೆಸರು ಸಾತೊಡ್ಡಿ. ಶಾತೊಡ್ಡಿ ಅಂತಲೂ ಎನ್ನುತ್ತಿದ್ದರು. ವಡ್ಡಿ ಎಂಬ ಊರಿನಿಂದ ಮುಂದೆ ಇತ್ತು ಅದು. ಈಗಲೂ ಸಾತೊಡ್ಡಿ ಫಾಲ್ಸ್ ಇದೆ. ಯಲ್ಲಾಪುರದಿಂದ ಗಣೇಶಗುಡಿ ಮಾರ್ಗವಾಗಿ ಜಲಪಾತದ ಒಂದು ಕಿಲೋಮೀಟರ್ ಹತ್ತಿರದ ತನಕ ಹೋಗಲು ವ್ಯವಸ್ಥೆ ಇದೆ. ಆದರೆ ಆಗ ನಾವು ಬರಬಳ್ಳಿಯಿಂದ ನಡೆದು ಹೋಗುತ್ತಿದ್ದೆವು. ವಡ್ಡಿಯ ಮರದಸಂಕ ಅಥವಾ ಒಂದಡಿ ಅಗಲದ ಮರದ… Continue reading ಬರಬಳ್ಳಿ – ಭಾಗ 5

Uncategorized

ಬರಬಳ್ಳಿ. ಭಾಗ-೨

ಒಂದೆರಡು ವಿಷಯಗಳನ್ನು ಮೊದಲೇ ಹೇಳಿರದಿದ್ದರೆ , ನಾನು ಏನು ಹೇಳ್ತೇನೆ ಅನ್ನೊದು ನಿಮಗೆ ಅರ್ಥ ಆಗುವುದಿಲ್ಲ. ಅಬ್ಬಿ ಅಂದೆ. ಹಾಗೆಂದರೆ,….. ಹೇಳ್ತೀನಿ.  ಮಳೆಗಾಲದಲ್ಲಿ ಕಾಡಿನಲ್ಲಿ ಇಂಗಿದ ಮಳೆನೀರು,  ನಂತರ ವರ್ಷವಿಡೀ ಜಲ ಅಥವಾ ಒರತೆಯ ಮೂಲಕ ಹೊರಬರುತ್ತಿರುವ ಒಂದು ಕೆರೆ, ಆ ಕೆರೆಯಿಂದ ಸಣ್ಣ ಕಾಲುವೆಯ ಮೂಲಕ ಊರಿನ ಎಲ್ಲ ಮನೆಗಳ ತನಕವೂ ಹರಿದು ಬರುವ ನೀರು, ಅವರವರ ಮನೆಯ ಹತ್ತಿರ ಕಾಲುವೆಯಿಂದ ಸಣ್ಣದೊಂದು ನೀರಿನ ಹರಿವು, ಆ ಹರಿವ ನೀರಿಗೆ ಅಡಿಕೆ ಮರದಿಂದ ಮಾಡಿದ ಹರಿಣಿ,… Continue reading ಬರಬಳ್ಳಿ. ಭಾಗ-೨

Uncategorized

ಬರಬಳ್ಳಿ. ಭಾಗ-1

ನನ್ನ ಪ್ರಕಾರ, ಭೂಮಿಯ ಮೇಲಿನ ಸ್ವರ್ಗವಾಗಿತ್ತದು. ಸಾವಿರಾರು ಜಾತಿಯ ಹಲಸಿನ ಮರಗಳು, ಮಾವಿನ ಮರಗಳು, ರಾಂಫಲ, ಸೀತಾಫಲ, ತೆಂಗಿನ ಮರಗಳು, ಬೆಳ್ಳಿಮುಳ್ಳಣ್ಣು, ಪರಿಗೆ ಹಣ್ಣು, ಫೇರಲ ಹಣ್ಣು, ನೇರಳೆಹಣ್ಣು, ಮುರುಗಲಹಣ್ಣು, ಈಚಲಹಣ್ಣು, ಬೇರುಹಲಸಿನ ಮರಗಳು, ಜೇನು, ವಾಸಂತೀಕೆರೆಯ ಶುದ್ಧ ನೀರಿನ ಒರತೆ, ಆಲೇಮನೆ……….ಇಂದು ಇವೆಲ್ಲ ನೆನಪು ಮಾತ್ರ. ರಜೆ ಬಂದ ತಕ್ಷಣ ನಾನು ಅಜ್ಜನ ಮನೆಗೆ ಹೊರಡಲು ರೆಡಿಯಾಗಿರುತ್ತಿದ್ದೆ. ಮಾವಂದಿರಲ್ಲಿ ಯಾರಾದರೊಬ್ಬರು ಕರೆದೊಯ್ಯುತ್ತಿದ್ದರು ಬರಬಳ್ಳಿಗೆ. ಹಾಗಂತ ಸುಲಭದಲ್ಲಿ ಹೋಗಲಾಗುತ್ತಿರಲಿಲ್ಲ. ಕಾನಲೆಯಿಂದ ಸಿದ್ದಾಪುರ, ಶಿರಸಿ, ಯಲ್ಲಾಪುರ ಹೋಗಲು ಸುಮಾರು… Continue reading ಬರಬಳ್ಳಿ. ಭಾಗ-1