#ಶ್ರೀಧರಭಾಮಿನಿಧಾರೆ

#ಶ್ರೀಧರಭಾಮಿನಿಧಾರೆ • ಸಜ್ಜನಗಡದಲ್ಲಿ ಶ್ರೀಧರರಸೇವೆ

ಸಜ್ಜನಗಡದಲ್ಲಿ ಶ್ರೀಧರರು ಮಾಡಿದ ಸೇವೆಯ ಭಾಗವನ್ನು ಚರಿತ್ರೆಯಲ್ಲಿ ಓದಿದಾಗೆಲ್ಲ ನಾನು ಕಣ್ಣಲ್ಲಿ ನೀರು ತುಂಬಿಕೊಂಡಿದ್ದೇನೆ. ಸಾಧಾರಣವಾಗಿ ನಾನು ಬರವಣಿಗೆಯಲ್ಲಿ ತೊಡಗುವುದು ರಾತ್ರಿ ಹತ್ತರ ನಂತರವೇ. ಏಕೆಂದರೆ ಆ ಸಮಯದಲ್ಲಿ ಅತ್ತರೆ, ಕಣ್ಣಿರು ತುಂಬಿದರೆ ಯಾರಿಗೂ ಗೊತ್ತಗುವುದಿಲ್ಲ ನೋಡಿ, ಅದಕ್ಕೆ.

ಗಡದಲ್ಲಿ ಆ ಹಿಂದೆಯೂ ಎಷ್ಟೋ ಜನ ಸೇವೆ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಆದರೆ ಶ್ರೀಧರರು ಮಾಡಿದ ಸೇವೆ ಮಾತ್ರ “ನ ಭೂತೋ ನ ಭವಿಷ್ಯತಿ ” . ಇತ್ತೀಚೆಗೆ ನಾವು ನಾಲ್ಕು ಜನ ಸಜ್ಜನಗಡ ಯಾತ್ರೆ ಮಾಡಿದ್ದೆವು. ಆ ಮಹೋನ್ನತ ಗಡ, ಅಲ್ಲಿ ಬೀಸುವ ಕುಳಿರ್ಗಾಳಿ, ಎತ್ತರೆತ್ತರಕ್ಕೇರುವ ಮೆಟ್ಟಿಲುಗಳು, ಆ ವಾತಾವರಣದ ಬಗ್ಗೆ ಅಲ್ಲಿಯವರೆಗೆ ಮನದಲ್ಲಿ ಬರಿಯ ಕಲ್ಪನೆ ಇತ್ತಷ್ಟೇ, ಅಲ್ಲಿ ಹೋಗಿ ನೋಡಿದ ಮೇಲೆಯೇ ಆ ಎಲ್ಲ ವಿಷಯಗಳ ತೀವ್ರತೆ ಅರ್ಥವಾಗಿದ್ದು, ಅನುಭವಕ್ಕೆ ಬಂದಿದ್ದು. ಅನಿವಾರ್ಯವಾಗಿ ಪಯಣ ರದ್ದಾಗುವಂತ ಪರಿಸ್ಥಿತಿ ಬಂದಾಗ್ಯೂ, ಬಿಡದೇ ನನ್ನನ್ನೆಳೆದುಕೊಂಡು ಹೋದ ನಿರಂತರ ಚಲನೆಯಲ್ಲಿರು ಗೂ, vinay hegde ಗೂ ಅನಂತ ಧನ್ಯವಾದಗಳು.

ಶ್ರೀಧರರು ಸಜ್ಜನಗಡದಲ್ಲಿ ಮಾಡಿದ ಸೇವೆ ಎಷ್ಟು ಉಚ್ಚತರವಾದದ್ದು, ಎಂತಹ ಕಠೋರ ಪರಿಸ್ಥಿತಿಗಳಲ್ಲಿಯೂ ಅವರು ತಮ್ಮ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಳ್ಳದೇ , ಏಕಾಗ್ರತೆಯಿಂದ ಸಮರ್ಥರ ಸೇವೆ ಮಾಡಿದ್ದಾರೆಂಬುದನ್ನು , ಷಟ್ಪದಿಯ ರೂಪದಲ್ಲಿ ಹೇಳಲು ಈ ನನ್ನ ಲೇಖನಿಯು ವಿಫಲವಾಗಿದೆ. ನಿಜ ಹೇಳಬೇಕೆಂದರೆ ಚರಿತ್ರೆಯ ಕೆಲವು ಭಾಗಗಳನ್ನು ಓದುತ್ತಾ ನಾನು ಕಣ್ಣೀರುಗರೆದಿದ್ದೇನೆ. ಈ ಚರಿತ್ರೆಯನ್ನು ಪಠಣ ಮಾಡಿದ ನನ್ನ ಮಡದಿ ಚೈತ್ರಿಕಾ ಹಾಗೂ ನಾದಿನಿ ದೀಪಿಕಾ ಇವರೂ ಕಣ್ಣಲ್ಲಿ ನೀರುತುಂಬಿಕೊಂಡಿದ್ದನ್ನು ನೋಡಿದ್ದೇನೆ.

ಗುರುಗಳ ಸೇವಾಕಾಲವನ್ನು , ಷಟ್ಪದಿಯಲ್ಲಿ ವಿವರಿಸಿ ಹೇಳಲು ಸೋತೆನಾದರೂ , ಈ ಮುಖ್ಯ ಭಾಗಗಳು ನಿಮಗೆ, ಗುರುಭಕ್ತರಿಗೆ ಸಿಗದೇ ಹೋಗಬಾರದು ಎಂದು ಯೋಚಿಸಿದಾಗ ಈ ಉಪಾಯ ಹೊಳೆಯಿತು. ಈ ಅಧ್ಯಾಯದ ಚಿತ್ರ ತೆಗೆದು , ಅದಕ್ಕೆ ಸಣ್ಣ ವಿವರಣೆ ಬರೆದು, ಅದನ್ನು ಇಲ್ಲಿ ಹಾಕುವುದು. ಆ ಮೂಲಕ ಗುರುಗಳ ಆ ಪರಮೋಚ್ಚ ತರದ, ನಿಸ್ವಾರ್ಥ ಸೇವೆಯ ವಿವರ ನಿಮಗೆಲ್ಲರಿಗೂ ಸಿಗುವಂತಾಗಿ , ನಿಮ್ಮಲ್ಲಿನ ಗುರುಭಕ್ತಿ ಇನ್ನಷ್ಟು ದೃಢವಾಗಲಿ ಎಂಬ ಆಸೆಯಿಂದ ಚಿತ್ರಗಳನ್ನು ಹಾಕಿದ್ದೇನೆ.

ನೀವು ಗಡಿಬಿಡಿಯಲ್ಲಿದ್ದರೆ,  ಅವಸರದಲ್ಲಿದ್ದರೆ, ಕೆಲಸಕಾರ್ಯಗಳಲ್ಲಿದ್ದರೆ, ಪ್ರಯಾಣಿಸುತ್ತಿದ್ದರೆ ,  ಖಂಡಿತವಾಗಿಯೂ ಇದನ್ನು ಓದಬೇಡಿ. ಅರ್ಧ ಗಂಟೆಗಳ ಕಾಲ ಬಿಡುವು ಮಾಡಿಕೊಳ್ಳಿ, ಈ ಎಲ್ಲ ಚಿತ್ರಗಳನ್ನೂ ನಿಮ್ಮ ಮೊಬೈಲಿಗೋ, ಕಂಪ್ಯೂಟರ್ ಗೋ ಸೇವ್ ಮಾಡಿಕೊಳ್ಳಿ. ಬಿಡುವಾದಾಗ ಓದಿ, ಕಣ್ಣೀರಾಗಿ.

ಗುರುಗಳ ಬಗೆಗಿನ ನಿಮ್ಮ ಗೌರವ, ಭಕ್ತಿ, ಪ್ರೇಮ, ನಂಬಿಕೆ ಇನ್ನಷ್ಟು ಹೆಚ್ಚಾಗಲಿ. ಎಲ್ಲರಿಗೂ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳು ಹರಸಲಿ, ಮಂಗಳವನ್ನುಂಟು ಮಾಡಲಿ.

ಗುರು ಶ್ರೀಧರರಿಗೆ ಜಯವಾಗಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s